Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಾಡಿನಿಂದ ಬಂದ `ಡಾರ್ಲಿಂಗ್`
Posted date: 25 Mon, Nov 2013 – 04:40:34 PM

ಅಲೆಮಾರಿ ಸಂತು ಅವರ ‘ಡಾರ್ಲಿಂಗ್’ ಕನ್ನಡ ಸಿನೆಮಾ ಅತ್ಯಂತ ಕಷ್ಟಕರ ಸ್ಥಳಗಳಲ್ಲಿ ಅಂದರೆ ಕೇರಳದ ಚಾಲಾಕುಡಿ, ಅಗ್ರಪಲ್ಲಿ ಕಾಡಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಿ ಯಶಸ್ವಿ ಆಗಿ ಹಿಂತಿರುಗಿದೆ. ಅದೊಂದು ಧಟ್ಟ ಅರಣ್ಯದ ಪ್ರದೇಶ ಮುಖ್ಯರಸ್ತೆ ಇಂದ ಹತ್ತಾರು ಕಿಲೋಮೀಟರ್ ಕ್ರಮಿಸಿದರೆ ಮನಮೋಹಕವಾದ ಕಾಲು ದಾರಿ. ಅಲ್ಲಿ ಜಿಗಣೆಗಳು ಹೆಜ್ಜೆ ಹೆಜ್ಜೆಗು. ಚಿತ್ರ ತಂಡದ ಯಾರೊಬ್ಬರನ್ನು ಅದು  ಬಿಡದೆ ರಕ್ತ ಹೀರಿದೆ. ಆಗ ತಾನೇ ಮಳೆ ಬಂದು ಪಾಚಿಯಿಂದ ಕೂಡಿರುವ ಧಟ್ಟವಾದ ಅಗ್ರಪಲ್ಲಿ ಕಾಡು, ಅಂದರೆ ಅಲ್ಲಿನ ಕಾಟ ಹೇಳತೀರಿದ್ದಲ್ಲ. ಅಂತಹ ಸ್ಥಳಗಳಲ್ಲೇ ಮಣಿರತ್ನಂ ‘ರಾವಣ್ ಹಾಗೂ ಕಡಲ್’ ತಮಿಳು ಸಿನೆಮಕ್ಕೆ ಚಿತ್ರೀಕರಣ ಮಾಡಿದ್ದಾರೆ. ಅಂತಹ ನಿರ್ಜನ ಕಾಡಿನ ಪ್ರದೇಶದಲ್ಲಿ ‘ಡಾರ್ಲಿಂಗ್’ ಚಿತ್ರದ 60 ಜನರ ತಂಡ ಏಳು ದಿವಸಗಳ ಚಿತ್ರೀಕರಣ ಮಾಡಿ ಬಂದಿದೆ. ಸಾಹಸ, ಹಾಡಿನ ತುಣುಕುಗಳ ಭಾಗದ ತೆರೆಯಮೇಲೆ 15 ನಿಮಿಷ ಕಾಣುವ ಸಂದರ್ಭಗಳನ್ನು ಕ್ಯಾಮರದಲ್ಲಿ ತುಂಬಿಕೊಳ್ಳಲಾಗಿದೆ.

ನಾಯಕ್ ಯೋಗೀಶ್ ಕಾಲಿನ ಪೆಟ್ಟಿದ್ದರು ಜಿಗಣೆಗಳಿಂದ ಹೆಚ್ಚು ಕಚ್ಚಿಸಿಕೊಂಡು ಸಾಹಸ ಸನ್ನಿವೇಶಗಳಲ್ಲಿ ಪಾತ್ರವಹಿಸಿದರು. ಅವರ ಜೊತೆಗೆ ನಾಯಕಿ ಮುಕ್ತ, ಅವಿನಾಷ್, ಮಾಸ್ ಮಾಧ, ಉದಯ್, ಗೌತಮ್, ಶಶಿ, ಮೋಹನ್ ಮಾಂಬಳ್ಳಿ ಹಾಗೂ ಇತರರು ಪಾಲ್ಗೊಂಡವರು.

ಈ ಹಂತದ ಚಿತ್ರೀಕರಣದಲ್ಲಿ ಛಾಯಾಗ್ರಾಹಕ ಮಂಜುನಾಥ್ ನಾಯಕ್ ಅವರು ಚಲಿಸುವ ಕಾರಿನ ಮೇಲ್ಬಾಗದಲ್ಲಿ ಕುಳಿತು ಏಳು ಕಿಲೋಮೀಟರ್ ಅಷ್ಟು ಕ್ಯಾಮರದಲ್ಲಿ ಸೆರೆ ಹಿಡಿದ್ದಾರೆ. ಆಗ ಕಾರಿನ ಚಾಲಕ ಸ್ವತಃ ನಿರ್ದೇಶಕ ಸಂತು ಅವರೇ ಆಗಿದ್ದರಂತೆ.

ಸಂತು ಅವರು ಇನ್ನೆನ್ನಿದರು ಆರು ದಿವಸಗಳ ಮಾತಿನ ಭಾಗ ಹಾಗೂ ಮೂರು ಹಾಡುಗಳ ಚಿತ್ರೀಕರಣ ಮಾಡಿದರೆ ‘ಡಾರ್ಲಿಂಗ್’ ಚಿತ್ರೀಕರಣ ಮುಗಿದಂತೆ ಎನ್ನುತ್ತಾರೆ.

ಇದೊಂದು ತಂತ್ರಜ್ಞರೆಲ್ಲ ಸೇರಿ ನಿರ್ಮಾಣ ಮಾಡುತ್ತಿರುವ ಸಿನೆಮಾ ‘ಡಾರ್ಲಿಂಗ್’.  ಎಸ್ ಟೀಮ್ ಹಾಗೂ ಸಾಮಿ ಅಸ್ಸೋಸಿಯಟ್ ನಿರ್ಮಾಣದ ಈ ಚಿತ್ರದ ಛಾಯಾಗ್ರಾಹಕ ಮಂಜುನಾಥ್ ನಾಯಕ್, ನಿರ್ದೇಶಕ ಸಂತು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಟ ಯೋಗೇಶ್ ಅವರುಗಳೆ ನಿರ್ಮಾಪಕರುಗಳು.

ಅಲೆಮಾರಿಯಿಂದ ಜನಪ್ರಿಯತೆ ಗಳಿಸಿ, ‘ಡವ್’ ಸಿನೆಮಾ ಬಿಡುಗಡೆ ಹಂತದಲ್ಲಿ ಇರುವಾಗ ಸಂತು ಅವರು ‘ಡಾರ್ಲಿಂಗ್’ ಸಿನೆಮಾದ ಬಿರುಸಿನ ಚಿತ್ರೀಕರಣ ಮಾಡುತ್ತಿದ್ದಾರೆ.  ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಇದೆ. ಯುವ ಜನತೆಗೆ ಸಿನೆಮಾ ಮಾಡಿದರೆ ಮನೆ ಮಂದಿಯೆಲ್ಲಾ ಸೇರಿ ಸಿನೆಮಾ ನೋಡುವುದು ಸಾಧ್ಯ ಎಂದು ಅವರು ನಂಬಿದ್ದಾರೆ.


ಯೋಗೀಶ್ ಅವರಿಗೆ ನಾಯಕಿ ಆಗಿ ಮುಕ್ತ ಪರಭಾಷೆಯಿಂದ ಆಗಮಿಸಿದ್ದಾರೆ. ಮಂಜು ಮಾಂಡವ್ಯಅವರ ಸಂಭಾಷಣೆ, ಮಾಸ್ ಮಾಧ ಅವರ ಸಾಹಸ ಈ ಚಿತ್ರಕ್ಕೆ ಇದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾಡಿನಿಂದ ಬಂದ `ಡಾರ್ಲಿಂಗ್` - Chitratara.com
Copyright 2009 chitratara.com Reproduction is forbidden unless authorized. All rights reserved.